ಶರಪಂಜರ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ೧೯೭೧ ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಇದೇ ಹೆಸರಿನ ತ್ರಿವೇಣಿ ಅವರ ಕಾದಂಬರಿ ಮೇಲೆ ಆಧಾರಿತವಾಗಿದೆ. ಕಲ್ಪನಾ ಮತ್ತು ಗಂಗಾಧರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಇದುವರೆಗೆ ತಯಾರಿಸಲ್ಪಟ್ಟ ಅತ್ಯುತ್ತಮ ಕನ್ನಡ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ತ್ರಿವೇಣಿಯವರ ಕಾದಂಬರಿಯು ಸಮೃದ್ಧವಾಗಿ ದೃಶ್ಯಾತ್ಮಕವಾಗಿತ್ತು. ಪುಟ್ಟಣ್ಣನವರು ಪರದೆಯ ಮೇಲೆ ಕಾದಂಬರಿಗೆ ನಿಷ್ಠರಾಗಿ ಉಳಿದದ್ದು ಮಾತ್ರವಲ್ಲ ಜೊತೆಗೆ ತ್ರಿವೇಣಿಯವರ ಕಾದಂಬರಿಯ ಬಹುತೇಕ ಸಂಭಾಷಣೆಗಳನ್ನು ಉಳಿಸಿಕೊಂಡರು ಮತ್ತು ಅವುಗಳಿಗೆ ಅವರಿಗೆ ಉಪಕಾರ ಸಲ್ಲಿಸಿದರು. ಈ ಚಲನಚಿತ್ರವು ೧೯೭೨ ರಲ್ಲಿ ೨೦ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದು ೧೯೭೦-೭೧ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರವನ್ನು ನಂತರ ತೆಲುಗು ಭಾಷೆಯಲ್ಲಿ ವಾಣಿಶ್ರಿ ನಟಿಸಿದ ಕೃಷ್ಣವೇಣಿ (೧೯೭೪) ಎಂದು ರೀಮೇಕ್ ಮಾಡಲಾಯಿತು. == ಕಥಾವಸ್ತು == ಚಿತ್ರವು ಮಹಿಳಾ ಪಾವಿತ್ರ್ಯದ ವಿಷಯಗಳು, ಸಮಾಜದಿಂದ ಮಾನಸಿಕ ರೋಗಿಗಳ ಸ್ವೀಕೃತಿ ಮತ್ತು ವಿಶ್ವಾಸದ್ರೋಹಿ ಸಂಗಾತಿಗಳ ಸುತ್ತ ಸುತ್ತುತ್ತದೆ. ಕಥೆಯ ನಾಯಕಿ ಕಾವೇರಿ (ಕಲ್ಪನಾ) ಮತ್ತು ನಾಯಕ ಸತೀಶ್ (ಗಂಗಾಧರ್) ನ ಅಕಸ್ಮಾತ್ ಭೇಟಿಯೊಂದಿಗೆ ಕಥೆಯು ಆರಂಭವಾಗುತ್ತದೆ. ಸತೀಶ್ ಕಾವೇರಿಯನ್ನು ಪ್ರೀತಿಸತೊಡಗುತ್ತಾನೆ. ಕಾವೇರಿ ವಿದ್ಯಾವಂತೆ, ಆಧುನಿಕ, ಸುಂದರ ಮತ್ತು ಗೌರವಾನ್ವಿತ ಕುಟುಂಬದಿಂದ ಬಂದವಳಾಗಿರುತ್ತಾಳೆ. ಅಂತಿಮವಾಗಿ ಅವರು ತಮ್ಮ ಹೆತ್ತವರ ಆಶೀರ್ವಾದದಿಂದ ಮದುವೆಯಾಗುತ್ತಾರೆ. ಅವರು ಚಿತ್ರ-ಪರಿಪೂರ್ಣ ದಂಪತಿಗಳಾಗಿರುತ್ತಾರೆ. ಅವರು ತಮ್ಮ ಕನಸಿನ ಮನೆಯನ್ನು ನಿರ್ಮಿಸುತ್ತಾರೆ, ಮಗನನ್ನು ಪಡೆಯುತ್ತಾರೆ, ಕಾರು ಖರೀದಿಸುತ್ತಾರೆ ಮತ್ತು ಸಾಮಾನ್ಯವಾಗಿ ಸಮೃದ್ಧರಾಗುತ್ತಾರೆ. ಕಾವೇರಿ ಎರಡನೇ ಬಾರಿಗೆ ಗರ್ಭಿಣಿಯಾದಾಗ ವೈದ್ಯರು ಅವಳ ದೌರ್ಬಲ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಮಗುವಿನ ಜನನದ ನಂತರದ ಅವಧಿಯಲ್ಲಿ, ಆಕೆ ಹಿಂದೆ ಹದಿಹರೆಯದಲ್ಲಿ ನಡೆದ ನಿಂದನೆಯ ನೆನಪಿನಿಂದ ಪ್ರಚೋದಿತಗೊಳ್ಳುತ್ತಾಳೆ. ಇದರಿಂದ ಅವಳಲ್ಲಿ ಶಿಶುಜನನದ ನಂತರದ ಮನೋರೋಗದ ಲಕ್ಷಣಗಳು ಕಾಣಿಸಿಕೊಂಡು ಅವಳು ಅದಕ್ಕಾಗಿ ಆಂತರಿಕ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾಳೆ. ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಅವಳು ಮನೆಗೆ ಬರುತ್ತಾಳೆ. ಸತೀಶ್ ತನ್ನ ಹೆಂಡತಿಯೊಂದಿಗೆ ನಿಷ್ಠುರತೆಯಿಂದ ವರ್ತಿಸುತ್ತಾನೆ. ಮಾನಸಿಕ ಆರೈಕೆಯ ಸುತ್ತಲಿನ ಕಳಂಕದ ಕಾರಣ ಕಾವೇರಿ ತನ್ನ ಕುಟುಂಬದಿಂದ, ನೆರೆಮನೆಯವರ ಮತ್ತು ಸಮಾಜದಿಂದ ತಿರಸ್ಕಾರವನ್ನು ಎದುರಿಸಬೇಕಾಗುತ್ತದೆ. ಸತೀಶ್ ಒಬ್ಬ ಹೆಣ್ಣು ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಕಾವೇರಿ ಅಂತಿಮವಾಗಿ ಪತ್ತೆಹಚ್ಚುತ್ತಾಳೆ. ಅದನ್ನು ಸಹಿಸಲು ಸಾಧ್ಯವಾಗದೆ ಕಾವೇರಿಯಲ್ಲಿ ಯಾತನೆಯಿಂದ ಶಿಶುಜನನ ನಂತರದ ಲಕ್ಷಣಗಳು ಮತ್ತೆ ಕಾಣಿಸಿಕೊಳ್ಳುತ್ತವೆ. ಆಘಾತಕ್ಕೊಳಗಾದ ಒಬ್ಬ ಮಹಿಳೆಯಾಗಿ ಕಲ್ಪನಾ ಅವರ ಅಭಿನಯವು ವಿಮರ್ಶಕರಿಂದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿತು. ಚಿತ್ರವು ಎರಡು ಸಾಮಾಜಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಒಂದು ಪುರುಷರ ಅಹಂ ಮತ್ತು ಹಕ್ಕುಸಾಧನೆ. ಅವಳ ಹಿಂದಿನ ಘಟನೆಯ ಕಾರಣ ಕಾವೇರಿಯ ಗಂಡ ಅವಳನ್ನು ತಿರಸ್ಕರಿಸುತ್ತಾನೆ ಮತ್ತು ಅದನ್ನು ಅವಳಿಗೆ ವಿಶ್ವಾಸದ್ರೋಹಿಯಾಗಲು ನೆಪವಾಗಿ ಬಳಸುತ್ತಾನೆ. ಇನ್ನೊಂದು ಮಾನಸಿಕವಾಗಿ ರೋಗಿಗಳ ಸಾಮಾಜಿಕ ಸ್ವೀಕೃತಿ. ಕಾವೇರಿಯ ಆಳುಗಳು, ಅವಳ ಅಡುಗೆಯವನು, ಅವಳ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ಅವಳೊಂದಿಗೆ ಸಾಮಾನ್ಯವಾಗಿ ನಡೆದುಕೊಳ್ಳುವ ರೀತಿಯು ಸಮಾಜವು ಕಾವೇರಿಯಂತಹ ಜನರಿಗೆ ಅಗತ್ಯವಾದ ಸಂವೇದನೆಯನ್ನು ಹೊಂದಿರುವುದಿಲ್ಲ ಎಂಬುದನ್ನು ಚಿತ್ರಿಸುತ್ತದೆ. == ಪಾತ್ರವರ್ಗ == == ಧ್ವನಿವಾಹಿನಿ == ವಿಜಯಭಾಸ್ಕರ್ ಸಂಯೋಜಿಸಿದ ಧ್ವನಿವಾಹಿನಿಯನ್ನು ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿದರು == ಪ್ರತಿಕ್ರಿಯೆ == ಚಿತ್ರವು ಭಾರೀ ಹಿಟ್ ಆಯಿತು ಮತ್ತು ಕರ್ನಾಟಕದ ಸುಮಾರು ಮೂರು ಚಿತ್ರಮಂದಿರಗಳಲ್ಲಿ ಒಂದು ವರ್ಷ ಓಡಿತು. ಕಲ್ಪನಾ ಬಿಂಬಿಸಿದ ಕಾವೇರಿಯ ಪಾತ್ರವು ಕನ್ನಡ ಚಲನಚಿತ್ರದ ಇತಿಹಾಸದಲ್ಲಿನ ಅತಿ ಗಟ್ಟಿ ಮತ್ತು ವ್ಯಾಪಕವಾಗಿ ಮೆಚ್ಚುಗೆ ಪಡೆದ ಪಾತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ಕಲ್ಪನಾರ ವೃತ್ತಿಜೀವನಕ್ಕೆ ಪ್ರಚೋದನೆ ನೀಡಿತು. == ಪ್ರಶಸ್ತಿಗಳು == ೨೦ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಕನ್ನಡ ಚಲನಚಿತ್ರ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಈ ಚಿತ್ರವು ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು (1971) ಗೆದ್ದುಕೊಂಡಿತು. ೧೯೭೦–೭೧ ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮೊದಲ ಅತ್ಯುತ್ತಮ ಚಲನಚಿತ್ರ – ಸಿ. ಎಸ್. ರಾಜಾ ಅತ್ಯುತ್ತಮ ನಟಿ – ಕಲ್ಪನಾ ಅತ್ಯುತ್ತಮ ಚಿತ್ರಕಥೆ – ಪುಟ್ಟಣ್ಣ ಕಣಗಾಲ್ 15ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕನ್ನಡ ಸಿನಿಮಾದ ಹಿಂದಿನ ವಿಭಾಗದಲ್ಲಿ ಪ್ರದರ್ಶನಗೊಂಡಿತು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == @ ಐ ಎಮ್ ಡಿ ಬಿ